ಕೃಷಿ ಚಿಕಿತ್ಸಾ ಕೇಂದ್ರ ಮತ್ತು ಕೃಷಿ ವ್ಯವಹಾರ ಕೇಂದ್ರಗಳ ಸ್ಥಾಪನೆ
 
  ಬೇಸಾಯ ಪದ್ದತಿಗಳ ವೈವಿಧ್ಯೀಕರಣ ಮತು ಆಧುನೀಕರಣದೊಂದಿಗೆ ಕೃಷಿಗಾಗಿ ಸೇವೆಗಳ ಬೆಂಬಲವನ್ನು ಹೆಚ್ಚಿಸಿ, ವಿಸ್ತರಿಸುವ ಅವಶ್ಯಕತೆಯಿದೆ. ಮಾನ್ಯ ಹಣಕಾಸು ಸಚಿವರು ತಮ್ಮ ೨೦೦೧-೦೨ರ ಬಜೆಟ್ ಭಾಷಣದಲ್ಲಿ ಇಂತಹ ಕೇಂದ್ರಗಳ ಸ್ಥಾಪಿಸಲು ಅಕರ್ಷಕ ಷರತ್ತುಗಳನ್ನು ವಿಧಿಸಿ, ಸಾಲಸೌಲಭ್ಯವನ್ನು ವಿಸ್ತರಿಸಬೇಕು ಎಂದು ಅಪೇಕ್ಷಿಸಿದ್ದಾರೆ. ಆ ಪ್ರಕಾರ  
     
  ಉದ್ದೇಶಗಳು  
     
 
  ಸರ್ಕಾರಿ ವಿಸ್ತರಣಾ ವ್ಯವಸ್ಥೆಯ ಪ್ರಯತ್ನಗಳಿಗೆ ಪೂರಕವಾಗುವುದು. ಬೆಳ ವಿಧಾನಗಳು, ತಂತ್ರಜ್ಞಾನ ಪ್ರಸಾರ, ಕ್ರಿಮಿ ಕೀಟಗಳು ಮತ್ತು ರೋಗಗಳಿಂದ ಬೆಳೆ ಸಂರಕ್ಷಣೆ, ಮಾರುಕಟ್ಟೆಯಲ್ಲಿ ವಿವಿಧ ಬೆಳೆಗಳ ಬೆಲೆಗಳು ಮತ್ತು ಮಾರು ಕಟ್ಟೆ ಪ್ರವೃತ್ತಿಗಳು ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಚಿಕಿತ್ಸಾ ಸೇವೆಗಳು
 
     
  ಕೃಷಿ ವ್ಯವಹಾರ ಕೇಂದ್ರ ಎಂದರೇನು?  
     
  ಕೃಷಿ ವ್ಯವಹಾರ ಕೇಂದ್ರಗಳನ್ನು ಊಡಿಕೆಗಳ ಸರಬರಾಜು, ಬಾಡಿಗೆ ಮೇಲೆ ಕೃಷಿ ಉಪಕರಣಗಳು ಮತ್ತು ಇತರ ಸೇವೆಗಳನ್ನು ಒದಗಿಸಲು ರೂಪಿಸಲಾಗಿದೆ.  
     
  ಅರ್ಹತೆ  
 
  ಕೃಷಿ ಪದವೀಧರರು
 
     
 
  ಕೃಷಿಗೆ ಸಂಬಂಧ ಹೊಂದಿರುವ ತೋಟಗಾರಿಕೆ, ಪಶುಪಾಲನೆ, ಅರಣ್ಯ ವಿಜ್ಞಾನ, ಹೈನುಗಾರಿಕೆ, ಪಶುವೈದ್ಯ, ಕೋಳಿ ಸಾಕಣೆ, ಮತ್ಸೋಧ್ಯಮ (ಪಿಸಿಕಲ್ಚರ್) ಮತ್ತಿತರ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವೀಧರರಾದವರು.
 
     
  ಯೋಜನಾ ವೆಚ್ಚ ಮತ್ತು ವ್ಯಾಪ್ತಿ:  
 
  ಯೋಜನೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿ/ಗುಂಪು ಆಧಾರದ ಮೇಲೆ ಕೈಗೆತ್ತಿಕೊಳ್ಳಬಹುದು.
 
     
 
  ಯೋಜನೆಯ ಅಂತಿಮ ಮಿತಿ:
   

ವ್ಯಕ್ತಿಗಳಿಗೆ  - ರೂ.೧೦ಲಕ್ಷ
ಗುಂಪುಗಳಿಗೆ   - ರೂ.೫೦ಲಕ್ಷ

 
  ಸಾಲದ ಅವಧಿ  
 
೫ ರಿಂದ ೧೦ ವರ್ಷ ಬ್ಯಾಂಕು ನಿರ್ಧರಿಸುವಂತೆ ಎರಡು ವರ್ಷಗಳವರೆಗೆ ಕೃಪಾವಧಿ (ಗ್ರೇಸ್ ಪೀರಿಯಡ್)ಯೂ ಸೇರುತ್ತದೆ.

ಇತರ ಎಲ್ಲ ಷರತ್ತು ಮತ್ತು ನಿಬಂಧನೆಗಳು, ವಿಧಾನಗಳು, ಬಡ್ಡಿದರ ಸಾಮಾನ್ಯ ಯೋಜನೆಗೆ ಸಾಲ ನೀಡುವಾಗ ಅನ್ವಯವಾಗುವಂತೆ ಕೃಷಿ ಚಿಕಿತ್ಸಾಕೇಂದ್ರ ಮತ್ತು ಕೃಷಿ ವ್ಯವಹಾರ ಕೇಂದ್ರಗಳಿಗೂ ಅನ್ವಯವಾಗುತ್ತದೆ.
 
     
     
 
 
ಮುಖ ಪುಟ | ನಮ್ಮ ಬಗ್ಗೆ | ಸೇವಾ ವೆಚ್ಹಗಳು | ಸಂಪರ್ಕಿಸಿ |ನಿಮ್ಮ ಸಮೀಪದ ಶಾಖೆ | ಟೆಂಡರ್ | ಉದ್ಯೋಗ ಅವಕಾಶಗಳು | ರೈಟ್ ಟು ಇನ್ಫೊರ್ಮೇಶನ್ ಆಕ್ಟ್

ಬ್ಯಾಂಕಿಂಗ್ ಒಮ್ಬುಡ್ಸ್ಮನ್
| ದೂರು ವಿಭಾಗ | ಅಭಿಪ್ರಾಯ ಮತ್ತು ಅನಿಸಿಕೆಗಳು | ಸೈಟ್ ಮ್ಯಾಪ್
 
 
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by Arokia IT Pvt. Ltd, Bangalore