ಜಮೀನಿನಲ್ಲಿ ಬೆಳೆ ಉತ್ಪಾದನೆಯ ಅವಶ್ಯಕತೆಗಳನ್ನು ಪೂರೈಸುವುದು.
ಅರ್ಹತೆ
ಮೌಖಿಕ ಗೇಣೀದಾರರು, ಭೋಗ್ಯ ಕೃಷಿಕರು ಸೇರಿದಂತೆ ಎಲ್ಲಾ ಕೃಷಿಕರು.
ಸಾಲಮಿತಿಯ ಸ್ವರೂಪ
ಸಾಲವನ್ನು ಆವರ್ತ ನಗದು ಸಾಲದ ರೂಪದಲ್ಲಿ ವಿತರಿಸಲಗುತ್ತದೆ.
ಆ ಮಿತಿಯೊಳಗೆ ಎಷ್ಟು ಬಾರಿ ಬೇಕಾದರೂ ಹಣ ತೆಗೆದುಕೊಳ್ಳುವುದಕ್ಕೆ ಮತ್ತು ಸಲ್ಲಿಸುವುದಕ್ಕೆ ಅವಕಾಶ
ಅರ್ಹತಾಮಿತಿ: ರೈತನು ಅನುಸರಿಸುವ ವಿವಿಧ ಬೆಳೆ ಪದ್ಧತಿಗನುಗುಣವಾಗಿ ನಿರ್ಧರಿಸಲಾಗುವುದು
ರೈತರ ನಿತ್ಯಬಳಕೆಯ ಅವಶ್ಯಕತೆಯನ್ನು ಸಹ ಪರಿಗಣಿಸಬಹುದು
ವಾಯಿದೆ ಅವಧಿ
ಮೂರುವರ್ಷ. ಆದಾಗ್ಯೂ ಖಾತೆಯ ನಿರ್ವಹಣೆ ಮಿತಿಯೊಳಗೆ ಎಷ್ಟುಬಾರಿ ಬೇಕಾದರೂ ಹಣ ತೆಗೆದುಕೊಳ್ಳಬಹುದು ಮತ್ತು ಜಮಾ ಮಾಡಬಹುದು. ಅರ್ಹ ಪ್ರಕರಣಗಳಲ್ಲಿ ಚೆಕ್ ಪುಸ್ತಕ ಸೌಲಭ್ಯವನ್ನು ವಿಸ್ತರಿಸಬಹುದು.
ಕಾರ್ಡ್ ಕಂ ಪಾಸ್‌ಬುಕ್ ನೀಡಿಕೆ
ಈ ಯೋಜನೆಯಡಿಯಲ್ಲಿ ರೈತರಿಗೆ ಕ್ರೆಡಿಟ್ ಕಾರ್ಡ್ ಕಂ.ಪಾಸ್ ಬುಕ್ ಅನ್ನು ನೀಡಲಾಗುತ್ತದೆ.
ಬಡ್ಡಿದರ
ಈ ಯೋಜನೆಯಡಿಯಲ್ಲಿ ರೈತರಿಗೆ ಕ್ರೆಡಿಟ್ ಕಾರ್ಡ್ ಕಂ.ಪಾಸ್ ಬುಕ್ ಅನ್ನು ನೀಡಲಾಗುತ್ತದೆ.
ಬಡ್ಡಿದರ
ಮೂರು ಲಕ್ಷದವರೆಗೆ: ಖಾತೆಯು ಸಮರ್ಪಕವಾಗಿದ್ದರೆ ವಾರ್ಷಿಕ ಶೇ.೭.
ಇತರ ಎಲ್ಲಾ ಸಂದರ್ಭಗಳಲ್ಲೂ ಆದ್ಯತಾ ವಲಯದ ಸಾಲಕ್ಕೆ ಅನ್ವಯಿಸುವ ಬಡ್ಡಿದರ