| |
| |
ಉದ್ದೇಶ |
ತೋಟಗಾರಿಕೆಯನ್ನು ಉತ್ತೇಜಿಸುವುದು |
ಅರ್ಹತೆ |
ಆಯ್ದ ಬೆಳೆಗಳ ಕೃಷಿಗೆ ಸೂಕ್ತವಾದ ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರು |
ಸಾಲದ ಮೊತ್ತ ಮತ್ತು ವಿತರಣಾ ವಿಧಾನ. |
ನಬಾರ್ಡ್ ಕಾಲಕಾಲಕ್ಕೆ ಪ್ರತಿ ಘಟಕಕ್ಕೆ ನಿಗಧಿ ಮಾಡುವ ವೆಚ್ಚದ ಪ್ರಕಾರ.
ವಿತರಣೆಗೆ ಮುನ್ನ ಗಿಡವು ಫಲ ಕೊಡುವುದನ್ನು ಪ್ರಾರಂಭಿಸುವವರೆಗೆ ಹಲವು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. |
ಸೌಲಭ್ಯದ ರೀತಿ |
ಕೃಷಿ ಅಭಿವೃದ್ಧಿ ಸಾಲಗಳಿಗೆ ಸಂಬಂಧಿಸಿದಂತೆ |
ಮರುಪಾವತಿ |
ವಾರ್ಷಿಕ /ಅರೆ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಸಾಲದ ಅವಧಿಯನ್ನು ನೆಟ್ಟ ಗಿಡಗಳು ಫಲಕೊಡುವ ವಯಸ್ಸನ್ನು ಆಧರಿಸಿ, ೧೫ವರ್ಷಗಳ ವರೆಗೆ ವಿತರಿಸಬಹುದು. ಅಲ್ಲಿಯವರೆಗೆ ಸಾಲದ ಮರುಪಾವತಿಗೆ ವಿಳಂಬದ ಅವಧಿ (ಜಸ್ಟೇಷನ್ ಪೀರಿಯಡ್) ಇರುತ್ತದೆ. ಆದರೆ ಆ ಅವಧಿಗೆ ಬಡ್ಡಿಯನ್ನು ನೀಡಬೇಕಾಗುತ್ತದೆ. |
ಬಡ್ಡಿದರ |
ಕೃಷಿ ಅಭಿವೃದ್ಧಿ ಸಾಲಗಳಿಗೆ ಅನ್ವಯಿಸುವ ಪ್ರಕಾರ |
ಇತರ ಷರತ್ತುಗಳು |
- ಖಾತ್ರಿ ನೀರಾವರಿ-ಒಳ್ಳೆಯ ಬೆಳೆಶೈತ ಕೊಳವೆ ಬಾವಿ ಅಥವಾ ಬೇರಾವುದೇ ಬಹುವಾರ್ಷಿಕ ಆಕರ.
- ಸಾಲಪಾವತಿ ವಿಳಂಬದ ಅವಧಿಯಲ್ಲಿ ಬಡ್ಡಿಕಟ್ಟಲು ಆದಾಯದ ಮೂಲಗಳು
- ಮಂಜೂರಾತಿ ಸಮಯದಲ್ಲಿ ಬೆಳೆಗೆ ಸೂಕ್ತವೆಂದು ಮಣ್ಣು ಮತ್ತು ಜಲಪರೀಕ್ಷಾ ವರದಿ ಸಲ್ಲಿಸಬೇಕು.
- ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಸಹಾಯ ಧನ ಯೋಜನೆಯಡಿಯಲ್ಲಿ ಬರುವ ಸಂಯೋಜಿತ (ಕಾಂಪೋಸಿಟ್) ಯೋಜನೆಗಳ ನೆರವಿಗೆ ಸಾಲ ಮಂಜೂರಾತಿಮಾಡಲು ಪರಿಗಣಿಸಬಹುದು.
- ಖಾತರಿಯಾದ ಮಾರುಕಟ್ಟೆ ಲಭ್ಯತೆ ಇರಬೇಕು.
|