| |
| |
ಉದ್ದೇಶ |
ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್‌ಗಳ ಖರೀದಿ |
ಅರ್ಹತೆ |
| ರೈತರು/ಅರ್ಜಿದಾರರು ಕೆಳಕಂಡಂತೆ ಕನಿಷ್ಠ ಭೂ ಹಿಡುವಳಿದಾರರಾಗಿರಬೇಕು. |
- ನಾಲ್ಕು ಎಕರೆ ಬಹುವಾರ್ಷಿಕ ನೀರಾವರಿ ಭೂಮಿ
- ಎಂಟು ಎಕರೆ ಒಣಭೂಮಿ
- ೨.೫ಎಕರೆ ನೀರಾವರಿ ಭೂಮಿ ಮತ್ತು ೫ ಎಕರೆ ಒಣಭೂಮಿ
|
| ಅರ್ಜಿದಾರನು ಪ್ರಗತಿಪರ ರೈತನಾಗಿರಬೇಕು ಮತ್ತು ಅನುಪಸ್ಥಿತ /ಅನಿವಾಸಿ ಭೂಮಾಲೀಕನಾಗಿರಬಾರದು. |
|
ಸಾಲದ ಮೊತ್ತ |
ಟ್ರ್ಯಾಕ್ಟರ್ /ಪವರ್ ಟಿಲ್ಲರ್ ಮತ್ತು ಅಗತ್ಯವಾದ ಸಲಕರಣೆಗಳ ದರಸೂಚಿ ಆಧರಿಸಿ ಯಂತ್ರಗಳ ಬೆಲೆಯ ಗರಿಷ್ಠ ಶೇ.೯೦ರಷ್ಟು. |
ಮರುಪಾವತಿ |
೭ವರ್ಷ-೯ವರ್ಷ, ವಾರ್ಷಿಕ/ಅರೆವಾರ್ಷಿಕ/ ಕಂತುಗಳಲ್ಲಿ ಮರುಪಾವತಿಸಬಹುದು. |
ಬಡ್ಡಿದರ |
ಕೃಷಿ ಯಾಂತ್ರೀಕರಣವನ್ನು ಪ್ರಧಾನ ಕ್ಷೇತ್ರ ಎಂದು ಪರಿಗಣಿಸಿರುವುದರಿಂದ ವಿಶೇಷ ದರ. ಈಗಿನ ದರ ಶೇ.೧೨. |
ವಿಮೆ |
ವಾಹನವನ್ನು ಬ್ಯಾಂಕಿನ ಷರತ್ತುಗಳೊಂದಿಗೆ ಸಮಗ್ರ ವಿಮೆಮಾಡಿಸಬೇಕು. |
ಇತರೆ ಷರತ್ತುಗಳು |
ಹೊಸ ಟ್ರ್ಯಾಕ್ಟರು/ಪವರ್ ಟಿಲ್ಲರ್‌ಗಳು
ಟ್ರ್ಯಾಕ್ಟರಿಗೆ ಸ್ವಂತ ಜಮೀನಿನಲ್ಲಿ ಅಥವ ಸ್ವಂತ ಜಮೀನು ಬಾಡಿಗೆ ಕೆಲಸ (ಶೇ.೫೦ರಷ್ಟು ಸ್ವಂತ ಜಮೀನಿನಲ್ಲಿ) ವರ್ಷಕ್ಕೆ ೧೦೦೦ ಗಂಟೆ ಉತ್ಪಾದನಾ ಕೆಲಸ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಪವರ್ ಟಿಲ್ಲರ್‌ಗೆ ೧೫೦ಗಂಟೆಗಳ ಉತ್ಪಾದನೆ ಕೆಲಸವಿದ್ದರೆ ಸಾಕಾಗುತ್ತದೆ.
ಬಳಸಿದ ಟ್ಯಾಕ್ಟರುಗಳು
ಏಳುವರ್ಷಕ್ಕಿಂತ ಹೆಚ್ಚು ಹಳೆಯದಾಗಿರದ ಟ್ಯಾಕ್ಟರುಗಳು ಮಾತ್ರ ಸಾಲಕ್ಕೆ ಅರ್ಹ. |