ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ಸ್ಟೇಟ್‌ಬ್ಯಾಂಕ್‌ನಿಂದ ಪ್ರಾಯೋಜಿತವಾದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾದ ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಕಲ್ಪತರು ಗ್ರಾಮೀಣ ಬ್ಯಾಂಕ್ ವಿಲೀನದಿಂದ ಮೇ, ೨೪, ೨೦೦೬ರಂದು ಸ್ಥಾಪಿತವಾಯಿತು.
ಬ್ಯಾಂಕನ್ನು ಬಲಯುತಗೊಳಿಸಿ, ಕೃಷಿ ಮತ್ತು ಕೃಷಿಯೇತರ ವಲಯದ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಈಡೇರಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗುವುದು ವಿಲೀನದ ಉದ್ದೇಶ.
ವಿಲೀನದ ಪರಿಣಾಮವಾಗಿ ಬ್ಯಾಂಕಿನ ಕಾರ್ಯಕ್ಷೇತ್ರ ಏಳು ಜಿಲ್ಲೆಗಳಿಗೆ ಅಂದರೆ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವ್ಯಾಪಿಸಿದೆ. ಬ್ಯಾಂಕು ೨೧೫ ಶಾಖೆಗಳನ್ನು ಹೊಂದಿದ್ದು, ೧೧ಲಕ್ಷ (೧.೧ಮಿಲಿಯನ್) ಗ್ರಾಹಕರು ಆಧಾರವಾಗಿದ್ದಾರೆ.
ತನ್ನ ಕಾರ್ಯಕ್ಷೇತ್ರದಲ್ಲಿ ಬ್ಯಾಂಕು ರೈತ ಸಮುದಾಯ, ವ್ಯಾಪಾರಿವರ್ಗ, ವೃತ್ತಿಪರರು ಮತ್ತು ಸ್ವಯಂ ಉದ್ಯೋಗಿಗಳು, ಹಾಗೂ ಗೃಹ ಮತ್ತು ಅತಿಸಣ್ಣ ಕೈಗಾರಿಕೆಗಳ ಕುಶಲಕರ್ಮಿಗಳು (ಆರ್ಟಿಸಾನ್) ಮತ್ತು ಸಮಾಜದ ಇತರ ವರ್ಗಗಳ ಅಗತ್ಯ ಮತ್ತು ಆಶೋತ್ತರಗಳನ್ನು ಈಡೇರಿಸುವುದರಲ್ಲಿ ಮುಂಚೂಣಿಯಲ್ಲಿದೆ.
ಬ್ಯಾಂಕಿನ ಒಟ್ಟು ವಹಿವಾಟು ೨೧೫ ಶಾಖೆಗಳಿಂದ ೩೮೯೬ ಕೋಟಿ ರೂಪಾಯಿಗಳನ್ನು ಮೀರಿದೆ. ೯೩೨ ಸಿಬ್ಬಂದಿ ಮುಗುಳ್ನಗೆಯೊಂದಿಗೆ ಸ್ನೇಹಪೂರ್ಣ ಸೇವೆ ಸಲ್ಲಿಸಲು ಎಲ್ಲಾ ಶಾಖೆಗಳನ್ನು ಗಣಕೀಕರಿಸಲಾಗಿದೆ. ಕೃಷಿಯಲ್ಲಿ ಮತ್ತು ಸ್ವಸಹಾಯ ಸಂಘಗಳ ಘೋಷಣೆ ಮತ್ತು ಸಾಲ ಸಂಪರ್ಕದಲ್ಲಿ ಬ್ಯಾಂಕು ತೊಡಗಿಸಿಕೊಳ್ಳುವಿಕೆ ಎಲ್ಲಾ ವೇದಿಕೆಗಳಲ್ಲೂ ಪ್ರಶಂಸೆಗೆ ಒಳಗಾಗಿದೆ.
ಬ್ಯಾಂಕು ಗ್ರಾಹಕನ ಆರೈಕೆ ಮತ್ತು ಆಶೋತ್ತರಗಳನ್ನು ಗುರುತಿಸುವುದು ಪ್ರತಿಯೊಬ್ಬರ ಅಗತ್ಯಗಳಿಗೆ ಹೊಂದುವ ಅನೇಕ ನವನವೀನ ಉತ್ಪನ್ನಗಳನ್ನು ಹೊಂದಿದೆ. (ವಿವರಗಳನ್ನು ಬೇರೆಡೆ ಒದಗಿಸಲಾಗಿದೆ).
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದನ್ವಯ, ಬ್ಯಾಂಕಿನ ಎಲ್ಲಾ ೨೧೫ ಶಾಖೆಗಳಲ್ಲಿ ಕೋರ್ ಬ್ಯಾಂಕಿಗ್ ತಂತ್ರಾಂಶ ಅಳವಡಿಸಲಾಗಿದ್ದು ಒಂದೇ ವೇದಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಬರುವ ೨೦೦೦ ಜನಸಂಖ್ಯೆ ಮೇಲ್ಪಟ್ಟ ಗ್ರಾಮಗಳಲ್ಲಿ ‘ವ್ಯವಹಾರ ಪ್ರತಿನಿಧಿ’ಗಳನ್ನು ನೇಮಿಸಲಾಗುತ್ತಿದೆ.
ಪ್ರಶಸ್ತಿಗಳು:
೧. ಬ್ಯಾಂಕು ೨೦೦೬-೦೭ ಮತ್ತು ೨೦೦೭-೦೮ರಲ್ಲಿ ಎಸ್.ಬಿ.ಐ.ನ ಪಾಲುದಾರ ಬ್ಯಾಂಕುಗಳು ಪ್ರಾಯೋಜಿಸಿದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಶಸ್ತಿ ಪಡೆದಿದೆ.
೨. ಬ್ಯಾಂಕು ೨೦೦೬-೦೭, ೨೦೦೭-೦೮ ಮತ್ತು ೨೦೦೮-೦೯ರಲ್ಲಿ ರಾಜ್ಯಮಟ್ಟದಲ್ಲಿ ಸ್ವಸಹಾಯ ಸಂಘಗಳ ಸಾಲ ಸಂಪರ್ಕ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ನಬಾರ್ಡ್‌ನಿಂದ ಮನ್ನಣೆ ಪಡೆದಿದೆ.
ಗ್ರಾಹರಕ ಪಾಲನೆ ಮತ್ತು ಕಾಳಜಿ ನಮ್ಮ ಧ್ಯೇಯೋದ್ದೇಶ
ಬ್ಯಾಂಕಿನ ಬಗ್ಗೆ ಹೆಚ್ಚು ತಿಳಿಯಲು ನಾನು ಬ್ಯಾಂಕಿನ ಜಾಲತಾಣ (ವೆಬ್‌ಸೈಟ್)ಕ್ಕೆ ನಿಮ್ಮ ಸಂದರ್ಶನವನ್ನು ಸ್ವಾಗತಿಸುತ್ತೇನೆ. ಬ್ಯಾಂಕಿನ ಸುಧಾರಣೆ ಕುರಿತ ನಿಮ್ಮ ಅಮೂಲ್ಯ ಸಲಹೆಗಳಿಗೆ ಸದಾ ಸ್ವಾಗತವಿದೆ.
ಎಲ್.ಟಿ.ಅಂಬುಜಾಕ್ಷಿ
ಅಧ್ಯಕ್ಷಿಣಿ |